ಶನಿವಾರ, ಜುಲೈ 9, 2022

ಸಾಮಾಜಿಕ ಜಾಲತಾಣಗಳನ್ನು ಗಡಗಡನೆ ಅಲುಗಾಡಿಸುವಂತೆ ಮಸ್ತ್ ಫೋಟೋಶೂಟ್ ಮಾಡಿಸಿದ ಬೆಣ್ಣೆಯಂತೆ ಹೊಳೆಯುವ ನಟಿ ವೈಷ್ಣವಿ ಗೌಡ! ಇಲ್ಲಿವೆ ನೋಡಿ ಫೋಟೋಸ್!!

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಚಂದುಳ್ಳಿ ಚೆಲುವೆಯರು ಇಂದು ಪ್ರೇಕ್ಷಕರನ್ನು ಗಮನಸೆಳೆಯುತ್ತಿದ್ದಾರೆ. ತಾವು ಮಾಡಿರುವ ಮೊದಲ ಧಾರಾವಾಹಿಗಳಲ್ಲಿಯೇ ಜನರನ್ನ ಹೆಚ್ಚು ಆಕರ್ಷಿಸುತ್ತಾರೆ. ಇನ್ನು ಅವರ ನಟನೆಯಂತೂ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಎಂದು ಯಾರು ಊಹಿಸುವುದಕ್ಕೂ ಸಾಧ್ಯವಿಲ್ಲ ಅಷ್ಟು ಪಕ್ವ ನಟನೆಯನ್ನು ಮೈಗೂಡಿಸಿಕೊಂಡಿರುತ್ತಾರೆ ಕೆಲವು ಕಲಾವಿದರು. ಇಂಥ ಚೆಲುವೆ ಇರಲಿ ಡಿಂಪಲ್ ಕ್ವೀನ್ ವೈಷ್ಣವಿ ಗೌಡ ಕೂಡ ಒಬ್ಬರು.

ವೈಷ್ಣವಿ ಗೌಡ ಅನ್ನುವುದಕ್ಕಿಂತ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದರೆ ನಿಮಗೆಲ್ಲರಿಗೂ ಬೇಗ ಅರ್ಥವಾಗಬಹುದು. ಯಾಕಂದ್ರೆ ಈ ಗುಳಿ ಕೆನ್ನೇಯ ಚೆಲುವೆ ಫೇಮಸ್ ಆಗಿದ್ದೆ ಸನ್ನಿಧಿ ಎನ್ನುವ ಪಾತ್ರದ ಮೂಲಕ. ಕಲರ್ಸ್ ಕನ್ನಡದಲ್ಲಿ ಕೆಲವು ವರ್ಷಗಳ ಕಾಲ ಪ್ರಸಾರವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ಧಾರ್ಥ ಹಾಗೂ ಸನ್ನಿಧಿಯವರ ಪಾತ್ರ ಜನರನ್ನ ಅತಿಯಾಗಿ ಆಕರ್ಷಿಸಿತ್ತು. ನಿಜ ಜೀವನದಲ್ಲಿಯೂ ಕೂಡ ಈ ಕ್ಯೂಟ್ ಜೋಡಿ ಒಂದಾದರೆ ಎಷ್ಟು ಚೆನ್ನಾಗಿರುತ್ತೆ ಅಂತ ನೆಟ್ಟಿಗರು ಮಾತನಾಡಿಕೊಂಡಿದ್ದರು. ಆದರೆ ನಮ್ಮಿಬ್ಬರದ್ದು ವೃತ್ತಿ ಸ್ನೇಹವಷ್ಟೇ ಅಂತ ಸಿದ್ದಾರ್ಥ್ ಇನ್ನೊಬ್ಬ ಹುಡುಗಿಯ ಜೊತೆ ಮದುವೆಯಾಗಿ ಈ ಎಲ್ಲಾ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದರು.
ಇನ್ನು ಮಿಲ್ಕ್ ಬ್ಯೂಟಿ ವೈಷ್ಣವಿ ಗೌಡ ಮಾತ್ರ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ನಟಿ ವೈಷ್ಣವಿ ಗೌಡ ದೇವಿ ಎನ್ನುವ ಧಾರವಾಹಿ ಮೂಲಕ ಕಿರುತೆರೆಯ ನಟನೆಯನ್ನು ಆರಂಭಿಸಿದರು. ಇದಾದ ಬಳಿಕ ಇನ್ನೂ ಒಂದೆರಡು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು ಸನ್ನಿಧಿ ಪಾತ್ರದ ಮೂಲಕ ವೈಷ್ಣವಿ ಗೌಡ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು.
ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿಯನ ಮುಗಿಸಿ ನಂತರ ಬಿಗ್ ಬಾಸ್ ಸೀಸನ್ 8ರ ಸ್ಪರ್ಧೆಯಾಗಿ ಕೂಡ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿಯೂ ತಮ್ಮದೇ ಆದ ಆಟದ ಶೈಲಿಯಿಂದಾಗಿ ಜನರಿಗೆ ಇನ್ನಷ್ಟು ಇಷ್ಟವಾಗಿದ್ದರೂ ವೈಷ್ಣವಿ ಗೌಡ. ಟಾಪ್ ಫೈವ್ ನಲ್ಲಿ ಒಬ್ಬ ಕಂಟೆಸ್ಟೆಂಟ್ ಆಗಿರುವುದರ ಮೂಲಕ ವೈಷ್ಣವಿ ಗೌಡ ಕನ್ನಡಿಗರ ಮೆಚ್ಚಿನ ಮನೆಮಗಳು ಎನಿಸಿದ್ದರು.

ವೈಷ್ಣವಿ ಗೌಡ ಅವರು ಬೆಳ್ಳಿ ಚುಕ್ಕಿ ಹಳ್ಳಿ ಚುಕ್ಕಿ, ಬಹುಕೃತ ವೇಷ ಮೊದಲಾದ ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ. ಇನ್ನು ಕೆಲವು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ವೈಷ್ಣವಿ ಗೌಡ ಇತ್ತೀಚಿಗೆ ತಮ್ಮ ಕನಸಿನ ಮನೆಯನ್ನು ಪ್ರವೇಶಿಸಿದ್ದಾರೆ. ಹೌದು ವೈಷ್ಣವಿ ಗೌಡ ಇತ್ತೀಚೆಗೆ ತಮ್ಮದೇ ಆದ ಮನೆಯೋದನ್ನ ಖರೀದಿಸಿದ್ದು, ಮನೆ ಪ್ರವೇಶಕ್ಕೆ ಅವರ ಸ್ನೇಹಿತರು ಬಿಗ್ ಬಾಸ್ ಸ್ಪರ್ಧಿಗಳು ಮೊದಲಾದವರು ಆಗಮಿಸಿ ವಿಶ್ ಮಾಡಿದ್ದರು.
ಇನ್ನು ವೈಷ್ಣವಿ ಗೌಡ ಹೆಚ್ಚು ಅಭಿಮಾನಿಗಳನ್ನ ಗಳಿಸಿಕೊಂಡಿರುವುದು ಸೋಶಿಯಲ್ ಮೀಡಿಯಾ ಮೂಲಕ. ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ಹಲವು ಪೋಸ್ಟ್ ಗಳನ್ನು ಮಾಡುವುದರ ಮೂಲಕ ವೈಷ್ಣವಿ ಗೌಡ ಇನ್ನಷ್ಟು ಫೇಮಸ್ ಆಗಿದ್ದಾರೆ. ವೈಷ್ಣವಿ ಗೌಡ ಉತ್ತಮ ನೃತ್ಯಗಾರ್ತಿ ಹಾಗೂ ಯೋಗ ಪಟು ಕೂಡ ಹೌದು. ಹಾಗಾಗಿ ಆಗಾಗ ತಮ್ಮ ಫಿಟ್ನೆಸ್ ವಿಡಿಯೋಗಳನ್ನು ಕೂಡ ಮಾಡಿ ಹಾಕುತ್ತಾರೆ.
ಅಲ್ಲದೆ ವಿವಿಧ ಭಂಗಿಗಳಲ್ಲಿ ವಿವಿಧ ಬಟ್ಟೆಗಳನ್ನ ತೊಟ್ಟು ಫೋಟೋಶೂಟ್ಗಳನ್ನ ಮಾಡಿಸುತ್ತಾರೆ ವೈಷ್ಣವಿ ಗೌಡ. ಇತ್ತೀಚಿಗೆ ಬಿಳಿ ವರ್ಣದ ಪ್ಯಾಂಟ್ ಹಾಗೂ ಡಾಟೆಡ್ ಪಾರದರ್ಶಕ ಶರ್ಟ್ ಹಾಗೂ ಮ್ಯಾಚಿಂಗ್ ಕ್ಯಾಪ್ ತೊಟ್ಟು ಫೋಟೋಶೂಟ್ ಮಾಡಿಸಿದ್ದು, ಪಡ್ಡೆ ಹೈಕ್ಳ ನಿದ್ದೆಗೆಡಿಸಿದೇ. ಈ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಒಟ್ಟಿನಲ್ಲಿ ವೈಷ್ಣವಿ ಗೌಡ ಯಾವ ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ಹಾರ್ಟ್ ಫೇವರೆಟ್ ಕಿರುತೆರೆಯ ನಟಿ ಎನಿಸಿದರೆ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ.

ಬುಧವಾರ, ಜೂನ್ 15, 2022

ಅಫ್‌ಡೇಟೆಡ್ ಮಹೀಂದ್ರಾ ಬೊಲೆರೋ ಪವರ್ ಸಕತ್ ಆಗಿದೆ

ಮಹಿಂದ್ರಾ & ಮಹಿಂದ್ರಾ ಕಂಪನಿಯು ತನ್ನ ಅತ್ಯುತ್ತಮ ವಾಹನವಾದ ಬೊಲೆರೋವನ್ನು ಅಪ್ಡೇಟ್ ಮಾಡುತ್ತಿದ್ದು ಇದರ ಲುಕ್ ಹಾಗೂ ಫೀಚರ್ಸ್ ಮಹಿಂದ್ರಾ ಕಂಪನಿಯದ್ದೇ ಆಗಿದ್ದ ಥಾರ್ SUV ಗಿಂತಲೂ ಜಬರ್ದಸ್ತ್ ಆಗಿ ಕಾಣುತ್ತಿದ್ದು, ದಕ್ಷಿಣ ಆಫ್ರಿಕಾದ ಬೀದಿಗಳಲ್ಲಿ ಟೆಸ್ಟ್ ಡ್ರೈವ್ ವೇಳೆ ಕಣ್ಣಿಗೆ ಬಿದ್ದಿದ್ದು ಇನ್ನೇನು ಇದೇ ವರ್ಷ ಬಿಡುಗಡೆ ಮಾಡುವ ಸಂಭವವಿದೆ. ಮಹಿಂದ್ರಾ ಬೊಲೆರೋವನ್ನು ಅಪ್ಡೇಟ್ ಮಾಡಲಾಗಿದ್ದು, ಲುಕ್ಸ್ ಹಾಗೂ ಫೀಚರ್ಸ್ ನೋಡಿದರೆ ಫಿದಾ ಆಗುವುದು ಗ್ಯಾರಂಟಿ!

ಹಿಂದಿನ ಕೆಲವು ವರದಿಗಳ ಪ್ರಕಾರ ಬೊಲೆರೋವನ್ನು ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಇನ್ನುಳಿದಂತೆ ಎಲ್ಲ ಫೀಚರ್ಸ್ ಮೊದಲು ಇದ್ದವೇ ಇರಲಿವೆ ಎಂದು ಹೇಳಲಾಗುತ್ತಿತ್ತು, ಹಾಗೇನೇ ಎರಡು ಕಲರ್ ಗಳಲ್ಲಿ ಬರಲಿರುವ ಬೊಲೆರೋಗೆ ಫ್ರಂಟ್ 2 ಏರ್ ಬ್ಯಾಗ್ಸ್ ಅಳವಡಿಸಬಹುದು ಎಂಬ ಅಂದಾಜಿದೆ.

ಇದನ್ನೂ ಓದಿ: ಸಮೃದ್ಧ ಅಡಿಕೆ ತೋಟ ಮಾಡಬೇಕೇ? ಇದನ್ನ ಓದಿ

ಮಾಧ್ಯಮ ವರದಿಗಳ ಪ್ರಕಾರ ಅಪ್ಡೇಟೆಡ್ ಬೊಲೆರೋವನ್ನು ಇದೇ ವರ್ಷದ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಅಂದಾಜಿತ್ತು, ಆದರೆ ಈ ಬಗ್ಗೆ ಕಂಪನಿಯ ಮೂಲಗಳಿಂದ ಯಾವುದೇ ಮಾಹಿತಿ ಹೊರಗೆ ಬಂದಿಲ್ಲ. ಸಧ್ಯ ಇರುವ ಬೊಲೆರೋದ ಟಾಪ್ ಮಾಡೆಲ್ ನಲ್ಲಿ ಫಾಗ್ ಲೈಟ್ಸ್ ಸಿಸ್ಟಮ್ ಅಳವಡಿಸಲಾಗಿತ್ತು. ಲ್ಯಾಂಪ್ಸ್ ನ ನಿರ್ಮಾಣ ಅದೇ ಆಗಿರುತ್ತದೆ ಆದರೆ ಇವುಗಳ ಆಂತರಿಕ ನಿರ್ಮಾಣದಲ್ಲಿ ಕೊಂಚ ಬದಲಾವಣೆಗಳು ಕಾಣಬಹುದು.

ಇವುಗಳಲ್ಲದೆ ಇನ್ನು ಹಲವು ಹೊಸ ಫೀಚರ್ಸ್ ಕಾಣಲಿವೆ, ಆದರೆ ಮಾಡಿಫೈಡ್ ಡ್ಯಾಶ್ ಬೋರ್ಡ್ ಮತ್ತು ಅಪ್ ಹೋಲ್ಸ್ಟ್ರಿಗಳು ಕೂಡ ಸೇರಿಕೊಂಡಿವೆ. ಅಲ್ಲದೆ ಇನ್ನಷ್ಟು ಮಾಡಿಫೈಡ್ ಫೀಚರ್ಸ್ ಹಾಗೂ ಕ್ಯಾಬಿನೆಟ್ ಅಳವಡಿಸುವ ಸಾಧ್ಯತೆ ಇದೆ. ಕಾರಿನಲ್ಲಿ ABS, EBD ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್ ಮತ್ತು ಸ್ಪೀಡ್ ಅಲರ್ಟ್ ನಂತಹ ಆಧುನಿಕ ಫೀಚರ್ಸ್ ಸಿಗಲಿವೆ.

ಎಂಜಿನ್ನಿನ ಬಗ್ಗೆ ಮಾತನಾಡುವುದಾದರೆ, ಮಹಿಂದ್ರಾ ಬೊಲೆರೋ – 2022 ರಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಿದ್ದು, ಇದು 75 bhp ಮತ್ತು 210 nm ಪೀಕ್ ಟಾರ್ಕ್ ಜೆನರೇಟ್ ಮಾಡುತ್ತದೆ. ಈ ಎಂಜಿನ್ ಗೆ 5 ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ನೀಡಲಾಗಿದ್ದು, ARAI ಯ ಪ್ರಕಾರ, ಈ SUV ಯು 16.7 kmpl ಡೀಸೆಲ್ ಮೇಲೆಜ್ ನೀಡುತ್ತದೆ, ಇದರಲ್ಲಿ ಮೂರು ಸಿಲಿಂಡರ್ ಎಂಜಿನ್ ನ ಜೊತೆಗೆ ಬರಲಿದ್ದು, ಎಂಜಿನ್ ಬಹಳ ಶಕ್ತಿಶಾಲಿಯಾಗಿದೆ ಹಾಗೂ ಅತ್ಯಂತ ವೇಗದಲ್ಲಿ ಓಡಲಿದೆ.ಇದಲ್ಲದೆ 2022 ರಲ್ಲಿ ಮಹಿಂದ್ರಾ & ಮಹಿಂದ್ರಾ ಕಂಪನಿಯು ಬೊಲೆರೋ ಅಷ್ಟೇ ಅಲ್ಲದೆ ಹೊಸ ಮಾದರಿಯ ಸ್ಕಾರ್ಪಿಯೋವನ್ನು ಹೊಸ ಫೀಚರ್ಸ್ ಗಳಿಂದ ಮಾರುಕಟ್ಟೆಗೆ ತರಲಿದೆ, ಆದರೆ ಈ ಸ್ಕಾರ್ಪಿಯೋ ವಾಹನವು ಸಧ್ಯ ಇರುವ ಸ್ಕಾರ್ಪಿಯೋ ಮಾದರಿಯನ್ನು ರಿಪ್ಲೇಸ್ ಮಾಡುವುದಿಲ್ಲ.

ಸೋಮವಾರ, ಫೆಬ್ರವರಿ 7, 2022

ದಿ ಬೆಸ್ಟ್ ಅಡಿಕೆ ತಳಿ ಕ್ಯಾಸನೂರು ಅಡಿಕೆ ಸಸಿಗಳು

ಕ್ಯಾಸನೂರು ಅಡಿಕೆಯು ಬಹಳ ಪ್ರಮುಖ ಹೆಸರುವಾಸಿ ತಳಿಯ ಸಸಿಗಳು.

ಅಡಿಕೆ ಬೆಳೆಯುವವರು ಪ್ರಪ್ರಥಮ ಆಯ್ಕೆ ಮಾಡಬೇಕಾದದ್ದು ತಳಿಯನ್ನ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ ಮತ್ತು ಭವಿಷ್ಯ ಸುಧೀರ್ಘ. ಇದು ಮನೆ ಕಟ್ಟುವುದಕ್ಕೆ ಪೌಂಡಿಷನ್ ಹಾಗೂ ಪಂಚಾಂಗ ಹಾಕಿದಂತೆ. ನಿಮಗೆ ಗೊತ್ತಿರುವಂತೆ ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ. ಯಾವಾಗಲೂ ತಳಿ ಆಯ್ಕೆ ಮಾಡುವಾಗ ತಳಿ ಮಿಶ್ರಣ ಆಗದಂತ ಜಾಗದಿಂದ, ಸೂಕ್ತ ವಿಧಾನದಿಂದ ಬೀಜವನ್ನು ಆಯ್ಕೆ ಮಾಡುವವರೇ ಸಸಿ ಬೆಳಸಿದವರಿಂದ ತರಿಸಿಕೊಂಡರೆ ಬಹಳ ಉತ್ತಮ. 

ಹಾಗೇ ನೋಡಿದರೆ ಕ್ಯಾಸನೂರು ಅಡಿಕೆ ತಳಿ ಅತೀ ಉತ್ತಮ

ಕರ್ನಾಟಕದಲ್ಲಿ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಅದಕ್ಕೆ  ತಾಗಿಕೊಂಡ ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದು, ಇದರಷ್ಟು ಆದಾಯ ಕೊಡಬಲ್ಲ ಬೆಳೆ ಬೇರೊಂದು ಇಲ್ಲದ ಕಾರಣ  ಇನ್ನೂ ಇನ್ನೂ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಲೇ ಇರುತ್ತದೆ.
ಲೋಕಲ್ ತಳಿಗಳಲ್ಲಿ ಕರಾವಳಿ ಭಾಗದ ತಳಿಯೇ ಬೇರೆ. (ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಇತ್ಯಾದಿ)
ಉಳಿದೆಡೆಯ ತಳಿಯೇ ಬೇರೆ. 
ದಾವಣಗೆರೆ, ಭೀಮ ಸಮುದ್ರ, 
ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುತ್ತಿರುವ ಅಡಿಕೆ ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ವಿಶಿಷ್ಟ ಗುಣದ ತಳಿ.
ಅಲ್ಲದೇ ಅಭಿವೃದ್ಧಿ ಪಡಿಸಿದ ತಳಿಗಳು ಇವೆ ಇವು ಕ್ಯಾಸನೂರು ತಳಿಯಷ್ಟು ಇಳುವರಿಯು ಇಲ್ಲ ಅರೋಗ್ಯವಂತ ಮರಗಳು ಆಗುವುದಿಲ್ಲ. ಆಗಾಗ ಎಲ್ಲ ಬಗೆಯ ರೋಗಬಾದೆಗೆ ತುತ್ತಾಗಿ ಸಾಯುತ್ತವೆ. ಅಧಿಕ ಆರೈಕೆ ಬೇಡುತ್ತವೆ ಮುತುವರ್ಜಿಯಿಂದ ನೋಡಿಕೊಳ್ಳುವುದೇ ತ್ರಾಸದಾಯಕವಗಿರುತ್ತದೆ. ಅಂತಹ ಸುಧಾರಿತ ಹಾಗೂ ಅಭಿವೃದ್ಧಿ ಪಡಿಸಿದ ತಳಿಗಳೆಂದರೆ ಮಂಗಳ (ಚೀನಾ ಮೂಲದ್ದು), ಸುಮಂಗಳ (ಇಂಡೋನೇಷ್ಯಾ) ಶ್ರೀ ವರ್ಧನ ( ಮಹಾರಾಷ್ಟ್ರ), ಶ್ರೀಮಂಗಳ (ಸಿಂಗಾಪುರ್), ಮೋಹಿತ್ ನಗರ (ಪಶ್ಚಿಮ ಬಂಗಾಳ), ಹಿರೇಹಳ್ಳಿ ( ಕರ್ನಾಟಕದ ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ನಾನಾ ಜಿಲ್ಲೆಯಲ್ಲಿದ್ದರು ಇಳುವರಿ ಕಮ್ಮಿ ದಾಟುಗಣ್ಣು ಅಂದರೆ ಬೇಗ ಬೆಳೆದು ಬೇಗ ಬೀಳುತ್ತದೆ), ಸಮೃದ್ದಿ (ಅಂಡಮಾನ್ ಮತ್ತು ನಿಕೋಬಾರ್), ಸ್ವರ್ಣಮಂಗಳ ಕೇರಳ), ಕಾಹಿಕುಚಿ (ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳು), ಮಧುರಮಂಗಳ (ಕರ್ನಾಟಕದ ಕೊಂಕಣ್ ಪ್ರದೇಶ), ನಲ್ ಬರಿ (ಉತ್ತರ ಬಂಗಾಲ), ಶತಮಂಗಳ, ಸಂಕರಣ ಮಾಡಿದ ತಳಿಗಳಾದ ವಿಟಿಎಲ್ಎಹೆಚ್ -1 ಮತ್ತು ವಿಟಿಎಲ್ಎಹೆಚ್ -2  ಇವುಗಳನ್ನ ಬೆಳೆದು ಕೈಸುಟ್ಟಕೊಂಡವರಿದ್ದಾರೆ. 

ಆದರೆ ಕ್ಯಾಸನೂರು ಅಡಿಕೆ ತಳಿಯನ್ನ ಮೇಲೆ ಹೇಳಿದ ಈ ಎಲ್ಲಾ ಭೂಪ್ರದೇಶದಲ್ಲಿ ಬೆಳದವರಿದ್ದಾರೆ ಅಲ್ಲೆಲ್ಲ ಉತ್ತಮವಾಗಿಯೇ ಹೊಂದಿಕೊಂಡು ಬೆಳೆದು ಕಡಿಮೆ ಕಾಳಜಿಯಲ್ಲಿ ವರ್ಷಕ್ಕೆ ಗಿಡ ಒಂದರಲ್ಲಿ ಸರಾಸರಿ 3.7 ರಿಂದ 4.9 kg ವರೆಗೆ ಇಳುವರಿ ನೀಡುತ್ತಿದೆ. ಬಹಳ ಮುತುವರ್ಜಿ ಮತ್ತು ಸಾವಯವ ಗೊಬ್ಬರದಲ್ಲಿ ಬೆಳೆದರೆ 5 ರಿಂದ 6 kg ಇಳುವರಿ ಇದೆ. ಕೆಲವರು ಇದನ್ನೇ ಹೈಟೆಕ್ ಆಗಿ ರಸಗೊಬ್ಬರಗಳು, ರಾಸಾಯನಿಕ ಸೂಕ್ಷ್ಮ ಪೋಷಕಾಂಶಗಳನ್ನ ಹಾಗೂ ಹಲವು ಒಳಸುರಿಗಳನ್ನ ಹಾಕಿ ಬೆಳೆದು ಸರಾಸರಿ 10 ಕೆಜಿಗೂ ಅಧಿಕ ಇಳುವರಿ ಪಡೆದ ದಾಖಲೆ ಇದೆ. ಮರದ ಬಾಳಿಕೆ ಅಧಿಕ ರೋಗಬಾದೆ ತೀರ ಕಡಿಮೆ.

ಕರಾವಳಿ ಜನ, ಮಂಗಳೂರು ಹಾಗೂ ಚಿಕ್ಕಮಗಳೂರು ಜನ, ಹಾವೇರಿ, ಹಾನಗಲ್, ದಾವಣಗೆರೆ, ತೀರ್ಥಹಳ್ಳಿ, ತಮಿಳುನಾಡು, ಆಂಧ್ರ, ಬೆಂಗಳೂರಿನ ನಾನಾ ಕಡೆ ಈ ತಳಿ ಬೆಳೆದು ಇದೇ ತಳಿ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ ಈ ತಳಿಯು ಅಲ್ಲಲ್ಲಿ ಬೆಳೆದ ಬೀಜಕ್ಕಿಂತ ಇಲ್ಲಿನ ಮೂಲ ಸಸ್ಯಗಳ ಬೀಜದ ಸಸಿಗಳೇ ಉತ್ತಮ ಎಂದು ಬೆಳೆದವರು ಹೇಳುತ್ತಾರೆ. ಜೊತೆಗೆ ಸಹಜವಾಗಿ ಯಾವುದೇ ರಾಸಾಯನಿಕ ಬಳಸದೆ ಬೆಳಸಿದ ಸಸಿಗಳನ್ನು ಕೊಂಡು ತರಬೇಕು. ಇತ್ತೀಚೆಗೆ ಅಡಿಕೆ ಸಸಿ ಲಾಭದಾಯಕ ಕಸುಬಾಗಿದೆ ಹಾಗಾಗಿ ರೈತರೇ ರೈತರಿಗೆ ಮೋಸ ಮಾಡಿ ಯಾವ ಯಾವುದೋ ತಳಿಯನ್ನ ಕ್ಯಾಸನೂರು ತಳಿಎಂದು ಹೇಳಿಕೊಂಡು ಮಾರತ್ತಾರೆ. ಗಿಡಗಳು ದಷ್ಟ ಪುಷ್ಟವಾಗಿ ಕಾಣಲೆಂದು ಟಾನಿಕ್ ಬಳಸಿರುತ್ತಾರೆ. ಇವು ಉತ್ತಮವಲ್ಲ. ಕ್ಯಾಸನೂರು ಗ್ರಾಮದಲ್ಲಿ ಮಹಾಬಲೇಶ್ವರ ಎಂಬ ಯುವ ರೈತರು ರಾಸಾಯನಿಕ ಮುಕ್ತ ಸಹಜವಾಗಿ ಸಸಿ ಬೆಳೆಸಿ ಮಾರುತ್ತಾರೆ.

ಕ್ಯಾಸನೂರು ಸೀಮೆ ಅಡಿಕೆ:
ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲೂಕಿನ ತನಕವೂ ಈ ಪ್ರದೇಶ ವ್ಯಾಪಿಸಿಕೊಂಡಿದೆ. ಕೆಳದಿಯ ಅರಸರ ಆಳ್ವಿಕೆಯ  ವ್ಯಾಪ್ತಿ ಎಲ್ಲಿ ತನಕ ಇತ್ತೋ  ಅಲ್ಲೆಲ್ಲಾ ಈ ಅಡಿಕೆ ತಳಿಯೇ ಇರುವುದು. ಆದರೆ ಕ್ಯಾಸನೂರಿನ ಅಡಿಕೆಯೇ ಬಹಳ ಸೂಕ್ತ. ಇದಕ್ಕೆ ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ  ಸ್ಥಳೀಯ ತಳಿ.
ಕೆಳದಿಯ ಅರಸರ ಕಾಲದಲ್ಲಿ  ಅಂದರೆ 15-16 ನೇ ಶತಮಾನದಲ್ಲಿ ಅಡಿಕೆ ಬೇಸಾಯ ಹೇಗೆ ಮಾಡಬೇಕು, ಅಂತರ ಎಷ್ಟು ಇಡಬೇಕು, 18 ಅಡಿ ಅಂತರ ಮತ್ತು ಮತ್ತೆ 9 ಅಡಿಗೆ ಎಡೆ ಸಸಿ ಆದರೆ ಆಯಾಗಿಡ ನೆಡಬೇಕು ಎಂಬ ಪದ್ದತಿ ಇತ್ತು. ಯಾವ ಯಾವ ಪ್ರದೇಶದಲ್ಲಿ ಹೇಗೇಗೆ ಬೆಳೆಸಬೇಕು ಎಂಬ ಬಗ್ಗೆ ಅಧ್ಯಯನಗಳೂ ನಡೆದಿತ್ತು ಎನ್ನುತ್ತಾರೆ ಇಲ್ಲಿನ ಪೂರ್ಜರು.
ಅತ್ತ ತೀರಾ ಮಲೆನಾಡು ಅಲ್ಲ, ಅರೆ ಮಲೆನಾಡೂ ಅಲ್ಲದ ಪ್ರದೇಶ.

ತಳಿಯ  ವಿಶೇಷ:
ಈ ಪ್ರದೇಶದಲ್ಲಿ ಅಡಿಕೆ ಬೆಳೆಗಾರರು ತೋಟದ ಆರೈಕೆ ಮಾಡುವುದು ತುಂಬಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನವರು ಪೋಷಕಾಂಶ, ನೀರಾವರಿ ಮಾಡುತ್ತಿದ್ದಾರೆ.
ಹಿಂದೆ ಅದೂ ಇರಲಿಲ್ಲ. ಆದರೂ ಎಕರೆಗೆ ಸರಾಸರಿ 17-18 ಕ್ವಿಂಟಾಲು ಇಳುವರಿ ಪಡೆಯುತ್ತಿದ್ದರು. ಈಗ ಕೆಲವರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ ಕಾರಣ ಎಕ್ರೆಗೆ 22-27 ಕ್ವಿಂಟಾಲು ಸಹ ಪಡೆಯುತ್ತಾರೆ. ಕೆಂಪಾದರೆ ಎರಡು ಕ್ವಿಂಟಾಲು ಕಡಿಮೆಯಾಗಬಹುದು. ಚಾಲಿ ಅಷ್ಟು ಬರುತ್ತದೆ. ಈ ಅಡಿಕೆಯ ತೂಕ ಜಾಸ್ತಿ. ದುಂಡಗೆ ಅಡಿಕೆ. ಸುಂದರವಾದ ಅಡಿಕೆ ಗೊನೆ. ಕಟ್ಟಿಂಗ್ ಉತ್ತಮ. ಬಾರೀ ಗಟ್ಟಿಯೂ ಅಲ್ಲ ಮೆದುವೂ ಅಲ್ಲ. ಜಗಿಯಲು ಕಷ್ಟ ಇಲ್ಲದ್ದು. ಮರಕ್ಕೆ ಅಂಟಿಕೊಂಡಂತೆ ದೊಡ್ದ ಗೊನೆ. ಇದನ್ನು ಮಟ್ಟು ಗೊನೆ ಎನ್ನುತ್ತಾರೆ. ಗೊನೆಗೆ ಕೈ ಹಾಕಲೂ ಸಾಧ್ಯವಿಲ್ಲದಷ್ಟು  ಒತ್ತೊತ್ತಾಗಿ ಕಾಯಿಗಳು.  ಅಡಿಕೆಯಲ್ಲಿ  ಕೆಲವರು ತೀರ್ಥಹಳ್ಳಿ ತಳಿ ಉತ್ತಮ ಎನ್ನುತ್ತಾರೆ. ಆದರೆ ಅದು ಚಾಲಿಗೆ ಆಗುವುದಿಲ್ಲ. ಇದು ಎರಡಕ್ಕೂ ಆಗುತ್ತದೆ. ಈ ತಳಿಯ ಅಡಿಕೆ ಚಾಲಿ ಕಿಲೋ ಗೆ 190-210 ಅಡಿಕೆ ಮತ್ತು ಕೆಂಪಾದರೆ 280-310 ಸಂಖ್ಯೆಯಲ್ಲಿ ಬರುತ್ತದೆ. ಇಲ್ಲಿ ರೋಗ ಬಾಧೆ ಕಡಿಮೆ ಎಂದೇ ಹೇಳಬಹುದು.

ಕ್ಯಾಸನೂರು ಗಿಡದ ಲಕ್ಷಣಗಳು

*ಮರದ ಗಣ್ಣು ಹತ್ತಿರವಾಗಿರುತ್ತವೆ. ಇದಕ್ಕೆ ಅಂತರ  ಮತ್ತು ಸಮರ್ಪಕ ಬಿಸಿಲಿನ ಲಭ್ಯತೆಯೂ ಕಾರಣ ಇರಬಹುದು.
ಪ್ರಾರಂಭದ ಕೆಲವು ವರ್ಷ ಗಣ್ಣು ಸ್ವಲ್ಪ ದೂರ ಇರುತ್ತದೆ. ನಂತರ ಅದು ಹತ್ತಿರವಾಗುತ್ತಾ ಬರುತ್ತದೆ.

*ಇದುವೇ ಮರಕ್ಕೆ ತಾಕತ್ತು ಕೊಡುವುದು. ಈಗಲೂ ಈ ಪ್ರದೇಶದಲ್ಲಿ 70 ರಿಂದ 100 ವರ್ಷದ ಅಡಿಕೆ ಮರಗಳು ಇವೆ.

*ಈ ತಳಿಯಲ್ಲದೆ ಇಲ್ಲಿ ಬೇರೆ ತಳಿಗಳೇ ಇಲ್ಲ. ಇರುವ ಬಹುತೇಕ ಮರಗಳೂ ಏಕ ಪ್ರಕಾರ ಇಳುವರಿ ಕೊಡುವವುಗಳು.

*ಆದ ಕಾರಣ ಮೂರು ನಾಲ್ಕು ಶತಮಾನಗಳಾದರೂ ಇಲ್ಲಿನ ಅಡಿಕೆ ತಳಿ ಗುಣ ವ್ಯತ್ಯಾಸ ಆಗಿಲ್ಲ.

ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ತಳಿ ಅಧ್ಯಯನ :
ಕರ್ನಾಟಕ ತೋಟಗಾರಿಕೆ ಇಲಾಖೆಯ ಸಲಹೆ ಮೆರೆಗೆ ಅಡಿಕೆ ತೋಟದ ಅಧ್ಯಯನ ಕೈಗೊಂಡಾಗ ಕ್ಯಾಸನೂರು ಅಡಿಕೆ ಉತ್ತಮವಾಗಿರುವುದು ಕಂಡುಬಂತು ಎಲ್ಲಾ ಮರಗಳ ಅಡಿಕೆಯನ್ನೂ ಸುಮಾರು 25 ವರ್ಷಗಳಿಂದ ಪರೀಕ್ಷಿಸುತ್ತಾ ಬಂದಿದ್ದಾರೆ. ಅದೇ ರೀತಿ ಪ್ರಪಂಚದ ನಾನಾ ಭಾಗಗಳಲ್ಲಿ ಬೆಳೆಸಿ ಅಧ್ಯಯನ ಮಾಡಿದರು. ಎಲ್ಲ ಕಡೆ ಇಲ್ಲಿಯ ತಳಿ ಉತ್ತಮವಾಗಿಯೇ ಬಂದಿತು. ಇವರ ಅಧ್ಯಯನದಲ್ಲಿ ಕಂಡು ಬಂದ ಮತ್ತೊಂದು ಅಂಶ ಏನೆಂದರೇ ಇಲ್ಲಿಯ ತಳಿ ಬೇರೆಡೆ ಬೆಳೆದರೂ ಅಲ್ಲಿಯ ಬೀಜ ಸರಿ ಬರುವುದಿಲ್ಲ. ಇಲ್ಲಿಂದಲೇ ಬೀಜ ತೆಗೆದುಕೊಳ್ಳಬೇಕು. ಹಾಗೆಂದು ಎಲ್ಲಾ ಮರಗಳೂ ಬೀಜಕ್ಕೆ ಆಗುವುದಿಲ್ಲ. ಮರಗಳ ಅಡಿಕೆಯನ್ನು ಹಲವಾರು ವರ್ಷಗಳ ಕಾಲ ಪರೀಕ್ಷಿಸಿ ಅದರಲ್ಲಿ ಯಾವ ಮರ ಉತ್ತಮ ಅದರಿಂದ ಬೀಜ ಆಯ್ಕೆ  ಮಾಡಬೇಕು.
ಹಲವಾರು ವರ್ಷಗಳಿಂದಲೂ ಬಹಳಷ್ಟು ಜನ ಅಡಿಕೆ ಬೆಳೆಗಾರರು ಕ್ಯಾಸನೂರಿನ ಕುಶಾನ್ ಮಹಾಬಲೇಶ್ವರ ಮತ್ತು ಕುಶಾನ್ ರಾಮಚಂದ್ರಾವರು  ಕೊಟ್ಟ ಬೀಜ ಹಾಗೂ ಸಸಿಗಳನ್ನೇ ಬೆಳೆಸುವುದು. ಸೊರಬ - ಸಾಗರ - ಶಿಕಾರಿಪುರ - ಶಿವಮೊಗ್ಗ ಸುತ್ತಮುತ್ತ ಅಡಿಕೆ ಬೀಜದ ಬಗ್ಗೆ ಕೇಳಿದರೆ ಮಹಾಬಲೇಶ್ವರರ ಹೆಸರು ಇಲ್ಲಿನ ಬೀಜ ತಂದು ತೋಟ ಮಾಡಿದವರಿಗೆ ಎಲ್ಲರಿಗೂ ಗೊತ್ತು. ಕ್ಯಾಸನೂರು ಅಡಿಕೆ ಬಗ್ಗೆ ಅಧ್ಯಯನ ಮಾಡಿದ ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುವಂತೆ ಈ ತಳಿ ಇಳುವರಿಯ ಮಟ್ಟಿಗೆ ಅತ್ಯುತ್ತಮ.
ಈ ಪ್ರದೇಶದ ಅಡಿಕೆಯ  ಇಳುವರಿಯನ್ನು  ನೋಡಿದರೆ ಎಂತವರೂ ದಿಗಿಲಾಗಬೇಕು. ಇದು ಕರಾವಳಿಯಲ್ಲೂ ಅದೇ ಗುಣ ತೋರಿಸುತ್ತದೆ. ಅಲ್ಲದೇ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚು. ಉಳಿದಂತೆ ಮಲೆನಾಡು, ಬಯಲು ಸೀಮೆ ಎಲ್ಲಾ  ಬಾಗಕ್ಕೂ ಹೊಂದುವ ತಳಿ.  ಕೆಲವು ಮೂಲಗಳ ಪ್ರಕಾರ ರಾಜ್ಯದಾದ್ಯಂತ ಇರುವ ಅಡಿಕೆ ತೋಟಗಳಲ್ಲಿ ಅರ್ಧ ಭಾಗ ಈ ತಳಿಯದ್ದೇ ಆಗಿರುತ್ತದೆ. ಇಲ್ಲಿರುವ ಬಹುತೇಕ ನರ್ಸರಿಗಳು ಈ ಪ್ರದೇಶಗಳ ಬೀಜಗಳನ್ನೇ ಸಸಿ ಮಾಡಿ ಮಾರಾಟ ಮಾಡುವುದಾಗಿರುತ್ತದೆ. ಆದರೆ ಅವರೆಲ್ಲ ಹಣದ ದುರಾಸೆಗೆ ಬಿದ್ದು ಇಲ್ಲಿಯ ಹೆಸರು ಹೇಳುತ್ತಾರೆ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.
ಮಹಾಬಲೇಶ್ವರ ಕ್ಯಾಸನೂರು +918095739929